This space belongs to the man who has captured wonderful moments of his past in the romantic language of poems.

Vishwa alias Kashi

My photo
I shall always remain 16years at heart plus whatever years life has to add, love to travel around the world, hope to die on a heap of books, a true believer in history and would definitely leave one before I go...

Monday, November 14, 2011

ನಾ ಕಂಡಂತೆ ನನ್ನ ದೊಡ್ಡಪ್ಪ

ನಾ ಕಂಡಂತೆ ನನ್ನ ದೊಡ್ಡಪ್ಪ
ಹೆಬ್ಬಾಲೆ ಪಾರ್ವತಮ್ಮ ಸುಬ್ಬಯ್ಯನವರ
ಜ್ಯೇಷ್ಠ  ಪುತ್ರನಾಗಿ ಜನಿಸಿ ಬಾಲ್ಯದಲ್ಲಿಯೇ
ಹೆತ್ತವರನು ಕಳಕೊಂಡು ಅನಾಥನಾಗಿ, ಸಿಕ್ಕ
ಒಂದೆರಡು ಹೆಮ್ಮರದ ಆಸರೆ ಪಡೆದು ವಿದ್ಯೆಯಾ ಕಲಿತು

ಕೆಲಕಾಲ ಶಾನುಭೋಗ ವೃತಿಯಾ ಕೈಕೊಂಡು
ಅನುಜರೊಡಗೂಡಿ ಜೀವನ ನಿರ್ವಹಣೆ ದುರ್ಭರವಾಗಿ 
 ಮಾರ್ಗ ಕಾಣದೆ ಅನುಜ ಸೀತಾರಾಮ, ನಾಗಪ್ಪ, ವೆಂಕಟಾಚಲ
ರೊಡಗೂಡಿ ಮೈಸೂರು ಪಟ್ಟಣವ ಸೇರಿ

ಉನ್ಮಾದ ವ್ಯಾಧಿಗ್ರಸ್ಥ ಸೀತಾರಾಮನ ಸೇವೆ ನಿಶ್ಪಲವಾಗಿ
ಕೃಷ್ಣರಾಜ ದವಾಖಾನೆ ಎದುರು ಕುಳ್ಳಿರಿಸಿ ಕಣ್ಣೀರ್ ಮಿಡಿದು 
ನಾಗಪ್ಪ, ವೆಂಕಟಾಚಲರೊಡಗೂಡಿ ಪಯಣ ಕೈಕೊಂಡು
ಯೌವನದಿ ನಾಗರತ್ನಳ ಕೈಹಿಡಿದು ಕೆಲದಿನದಲ್ಲಿ ಆಕೆ ಅಸುನೀಗಲು

ಗಾಯದ ಮೇಲೆ ಲವಣ ಸುರಿದಂತಾಗಿ ನಿಟ್ಟುಸಿರಿಟ್ಟು
ದುರ್ಭರ ಬಡತನಕೆ ಶರಣಾಗಿ ಉದರಂಭಣಕ್ಕೆ  ನಳಪಾಕ ವೃತ್ತಿಯಾ
ಹಿಡಿದು ಹೆಸರುಗಳಿಸಿ  ಪರಿಸರದ ಜನರಲ್ಲಿ ಮೊಗಣ್ಣನೆಂಬ
ಹೆಸರಲ್ಲಿ ಪ್ರಖ್ಯಾತನಾಗಿ, ಜೊತೆಗೆ ಎಲ್ಲಾ ಕುಶಲಕಲೆಗಳಲ್ಲಿ ನಿಷ್ಣಾತನಾಗಿ

ಶಾರದಮ್ಮಳ ಕೈಹಿಡಿದು ಆರು ಮಕ್ಕಳಿಗೆ ಪಿತನಾಗಿ
ಮಕ್ಕಳೆಲ್ಲರ ಏಳಿಗೆಗೆ ಶ್ರಮವಹಿಸಿ, ತಾನೇ ಸುಖಿ ಎಂಬ ಭಾವದಲ್ಲಿರಲು
ಸುತೆ ಸೀತಮ್ಮಳ ಪತಿ ರಾಜಣ್ಣನ ಅಕಾಲ ಸಾವಿಗೆ ಮರುಗಿ
ಕರೆತಂದು ಮಗಳು ಮೊಮ್ಮಕ್ಕಳನು ತನ್ನ ಮನೆಗೆ

ಮಗಳಿಗೆ ಆಸರೆ ನೀಡಿ ಮೊಮ್ಮಕ್ಕಳಿಗೆ  ವಿದ್ಯೆಯಾ ಕಲಿಸಿ
ಊರುಗೋಲಾಗಿ ನಿಂತರವರೆಲ್ಲರಿಗೂ ಯಜಮಾನನಾಗಿ
ಕೆಲಕಾಲ ಮೈಸೂರು ಅನಾಥಾಲಯದಲ್ಲಿ ಸೇವೆಗೈದು,
ಹೆಸರುಗಳಿಸಿ ನಳಪಾಕ ಪ್ರವೀಣನಾಗಿ

ನನ್ನ ತಂದೆ ವೆಂಕಟಾಚಲ ದೊಡ್ಡಪ್ಪ ನಾಗಪ್ಪನವರಿಗೆ
ಜೀವನೋಪಾಯಕ್ಕೆ ದಾರಿ ತೋರಿ ನನ್ನ ತಂಗಿಯರ
ಅಕಾಲ ಸಾವಿನಾದಿನಗಳಲಿ ನನ್ನ ಪಿತನಿಗೆ ಸಾಂತ್ವನ ನೀಡಿ
ನೋವಿನಲಿ ಭಾಗಿಯಾದರು ನನ್ನ ದೊಡ್ಡಪ್ಪ ಸೂರ್ಯನಾರಾಯಣಪ್ಪನವರು 


ಮನೆಗೆ ಬಂದ ಅತಿಥಿ ಅಭ್ಯಾಗತರನು ಆದರಿಸಿ ಉಪಚರಿಸಿ
ಅವರೆಲ್ಲರ ನೋವಿಗೆ ಸ್ಪಂದಿಸಿ, ಬಾಳಿಗೆದುರಾದ ಎಲ್ಲಾ ಕಷ್ಟ
ಕೋಟಲೆಗಳ ದಾಟಿ ಅತಿ ಕಷ್ಟ ಸಹಿಷ್ಣು ನಿತ್ಯ ಬಡತನದಲ್ಲೂ
ನಕ್ಕು ನಗಿಸಿದವರು  ನನ್ನ ದೊಡ್ಡಪ್ಪ ಸೂರ್ಯನಾರಾಯಣಪ್ಪನವರು

ಅವರಿಗೆ ಒಂದೆರಡು ವ್ಯಸನವಿತ್ತಾದರೂ  ಮೇರೆ ಮೀರುವಂತಿರಲಿಲ್ಲ
ಅವರಿಂದ ಕೆಲ ಕುಶಲ ಕಲೆಗಳ ಕಲಿತವನು ನಾನು. ನನ್ನ ಮನೆಯ
ಗೃಹಪ್ರವೇಶ, ನಳಪಾಕದ ಮೆಲುಸ್ತುವಾರಿಯ ರೂವರಿ ಅವರೇ
ನನ್ನ ಆಶೀರ್ವಧಿಸಿದವರು ನನ್ನ ದೊಡ್ಡಪ್ಪ ಸೂರ್ಯನಾರಾಯಣಪ್ಪನವರು

ಅವರ ವ್ಯಕ್ತಿತ್ವವನ್ನು ವರ್ಣಿಸಲು ಅಸಮರ್ಥನಾನು 
ಅತಿ ನೋವು ನುಲಿತಕೆ ಸಿಕ್ಕು ಎತ್ತರದ ಆಳು ಹುರಿ ಮೀಸೆ ಆಸಾಮಿ
ದುರ್ಮತಿ ನಾಮ ಸಂವತ್ಸರದ ಶ್ರಾವಣ ಬಹುಳ ಅಮಾವಾಸ್ಯೆ ಶನಿವಾರ
ದಂದು ಇಹದ ವ್ಯಾಪಾರಕ್ಕೆ ಇತಿಶ್ರೀ ಹಾಡಿದ ನನ್ನ ದೊಡ್ಡಪ್ಪ
ಸೂರ್ಯನಾರಯಣ್ಣಪ್ಪನವರು ಗತಿಸಿ ಮೂರು ದಶಕಗಳೇ ಕಳೆದರೂ
ಇನ್ನೂ ಹಚ್ಚ  ಹಸುರಾಗಿದೆ ಅವರೊಡನೆ ಕಳೆದ ಸುಮಧುರ ಸವಿ ನೆನಪು

ಸುಚರಿತ ನಟರಾಜ
(ಹೆಬ್ಬಾಲೆ ವೆಂಕಟಾಚಲಯ್ಯ ನಟರಾಜ)

No comments:

Editions