ಸತಿ ರತ್ನಾಳನ್ನು ಕುರಿತು
ಇಪ್ಪತು ವರ್ಷದ ಹಿಂದೆ
ವಧುವಾಗಿ ಹಸೆಮಣೆಯನೇರಿ
ಹರ್ಷದ ಹೊನಲ ಹರಿಸಿ
ಬಾಳ ಬಂಡಿಯನೇರಿದೆ ಉತ್ಸುಹದಿ
ಏಳು ಬೀಳುಗಳ ಸಮನಾಗಿ ಸ್ವೀಕರಿಸಿ
ದುಃಖ ದುಮ್ಮಾನಗಳ ಬದಿಗೆ ಸರಿಸಿ
ಬಾಳ ದೇಗುಲದಲಿ ಬೆಳಕ ತರಿಸಿ
ಸಂಸಾರ ನಾವೆಯನು ದಡಕೆ ಸೇರಿಸಿ
ಸಿರಿತನಕೆ ಹಿಗ್ಗದೇ ಬಡತನಕೆ ಕುಗ್ಗದೇ
ಸಂಸಾರದ ಭಾರವನು ಸಮನಾಗಿ ಸ್ವೀಕರಿಸಿ
ಹಿರಿ ದೈವಗಳ ಜ್ಯೋಥೆಗೆ ಭಂದುಗಳ ಸತ್ಕರಿಸಿದೆ
ಪೋಷಿಸಿದೆ ಜಂಜಡದ ದಿನಗಳಲಿ
ವಿಶ್ವ ರಮ್ಯರೆಂಬ ಮಕ್ಕಳನ್ನು ಹೆತ್ತು
ಸಲಹಿದೆ ನೀತಿ ಪಾಠಗಳ ನರುಹಿದೆ
ಹಿತವಾದ ಸಲಹೆಗಳ ಸಮಯದಲಿ
ನೀಡುತಲಿ ನನ್ನ ನೆರಳಾಗಿ ನಿಂತೆ
ಸಪ್ತ ಪದಿ ಅರ್ಥಗಳ ಸರಿಯಾಗಿ ಅರಿತು
ಅದರಂತೆ ನಡೆದ ಗರತಿ ನೀನಾದೆ
ಸುಪ್ತ ಚೀತನದಂತೆ ನನ್ನ ಒಡಲೊಳಗೆ
ಸೇರಿ ಗುಪ್ತಗಾಮಿನಿಯಾಗಿ ಹರಿಯುತಿರುವೆ
0201 Hrs 02/04/98
No comments:
Post a Comment